ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುವುದು ಹೇಗೆ? ಭಾಗ -1
ಉದಾಹರೆಗಾಗಿ:-
1.ಟಮೋಟೋವನ್ನೂ🍅 ವರ್ಷದಲ್ಲಿ ನಾಲ್ಕರಿಂದ ಐದು ಬಾರಿ ಬೆಳೆಯಬಹುದು. ಹೆಚ್ಚು ಅಂದರೆ ಎರಡು ಸಲ ಒಳ್ಳೆ ರೇಟ್ ಆದಾಯ ಸಿಗಬಹುದು.
ಅದ್ದರೆ ಅದೇ ಟೊಮೇಟೊವನ್ನೂ ಕಡಿಮೆ ಬೆಲೆ ಇದ್ದಾಗ ರೋಡಲ್ಲಿ ಚಲ್ಲಿ ಬೆಂಬಲ ಬೆಲೆ ಬೇಕು ಅಂತ ಕುರೋ ಬದಲು ಅದೇ ಟೊಮೆಟೊವನ್ನ 🍅 ಸಾಸ್/ಕೇಚಪ್,ಮಾಡಿ ಮಾರಾಟ ಮಾಡಿದರೆ ಲಾಭ 5 ಪಟ್ಟು ಹೆಚ್ಚು ಸಿಗಬಹುದು. ರೈತರು ಸಹಾ ಹತ್ತಾರು ಜನಗಳಿಗೆ ಕೆಲಸ ಕೋಟಂತಗುತದೆ.
2. ಆಲೂಗಡಡೆಯನ್ನು ಬೆಳೆ ಬೆಳೆದ ರೈತರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಇದ್ದಾಗ ಪೊಟಾಟೋ 🥔 ಚಿಪ್ಸ್ ಮಾಡಿ ಪ್ಯಾಕ್ನಲ್ಲಿ ಮಾರಾಟ ಮಾಡಿದರೆ ಅತೀ ಹೆಚ್ಚು ಲಾಭ.
3. ಮೆಣಸಿನಕಾಯಿ 🌶️ ಬೆಳೆ ಬೆಳೆದ ರೈತರು ಚಿಲ್ಲಿ ಸಾಸ್ ಮಾಡಿ ಮಾರಾಟ ಮಾಡಬಹದಾಗಿದೆ.
4. ಮಾವಿನಕಾಯಿ 🥭 ಬೆಳೆ ಬೆಳೆದ ರೈತರು ಉಪ್ಪಿನಕಾಯಿ ಪಾಕ್ ಮಾಡಿ ಮಾರಾಟ ಮಾಡಬಹುದು. ಅಥವಾ ಮಂಗೊ 🥤 🧃 ಜ್ಯೂಸ್ ಮಾಡಿ ಮಾರಾಟ ಮಾಡಬಹುದು.
5. ತೆಂಗು ಬೆಳೆ 🥥 ಬೆಳೆದ ರೈತರು ಕೊಬ್ಬರಿ ಮಾಡಿ ಕೊಬ್ಬರಿ ಎಣ್ಣೆ ತಯಾರು ಮಾಡಿ ಮಾರಾಟ ಮಾಡಬಹುದು.
6. ಕಡಲೆಕಾಯಿ ಬೆಳೆ ಬೆಳೆದ ರೈತರು ಕಡಲೆ ಎಣ್ಣೆ ತಯಾರು ಮಾಡಿ ಮಾರಾಟ ಮಾಡಬಹುದು.
7. ಭತ್ತ 🌾 ಬೆಳೆದ ರೈತರು ಅಕ್ಕಿ ಪ್ಯಾಕೆಟ್ ಮಾಡಿ ಮಾರಾಟ ಮಾಡಬಹುದು ಅಥವಾ ಅಕ್ಕಿ ಹಿಟ್ಟು ಮಾಡಿ ಮಾರಾಟ ಮಾಡಬಹುದು.
8. ಕಬ್ಬು ಬೆಳೆದ ರೈತರು ಬೆಲ್ಲ ತಯಾರು ಮಾಡಿ ಮಾರಾಟ ಮಾಡಬಹುದು.
ಲೋಕಲ್ ಫರ್ ವೋಕಲ್ ಅಂತಾರಲ್ಲ ಹಾಗೆ.
ಇನ್ನೂ ಮುಂತಾದವು ಬೆಳೆಗಲಿವೆ, ಪ್ರತಿ ಹೋಬಳಿ, ತಾಲೂಕುಗಳಲ್ಲಿಯೂ ರೈತ ಸಂಘ ಸಂಸ್ಥೆ ಮಾಡಿ ಒಟ್ಟಾಗಿ ಯಾವುದೇ ಮಧ್ಯವರ್ತಿಗಲ್ಲಿಲದೆ ಸ್ವಯಂ ಬೆಳೆದು ಸ್ವಯಂ ತಯಾರಿಸಿ ಗ್ರಾಹಕರಿಗೆ ನೇರ ಮಾರಾಟ ಮಾಡುವ ಮೂಲಕ ಅತೀ ಹೆಚ್ಚು ಲಾಭ ಪಡೆಯಲು ಸಾದ್ಯ.
ನಿಮ್ಮ ಸಲಹೆ ಅಭಿಪ್ರಾಯವನ್ನು ತಿಳಿಸಿ.
ಕನ್ನಡಿಗ ಕೃಷಿ ಡಾಟ್ ಇನ್
Comments
Post a Comment