Skip to main content

ಕರ್ಪೂರ ಮರದ ಸಂಪೂರ್ಣ ಮಾಹಿತಿ

 ಭಾರತೀಯರಿಗೆ ಕರ್ಪೂರವನ್ನೇನೂ ಪರಿಚಯಿಸಬೇಕಿಲ್ಲ. ಕರ್ಪೂರದ ಮರವನ್ನು ಖಂಡಿತಾ ಪರಿಚಯಿಸಬೇಕಿದೆ.ಏಕೆಂದರೆ *ಕರ್ಪುರ ಸಿಗುವುದು ಮರದಿಂದ, ಕೆಲವರಿಗೆ ಅಚ್ಚರಿ ಅನ್ನಿಸಬಹುದು, ಕರ್ಪುರ ಸಿಗುವುದು ಮರದಿಂದನಾ?*

ನಿಜ-

ಇದೊಂದು 50-60 ಅಡಿಗಳಿಂದ ನೂರಾರು ಅಡಿಗಳವರೆಗೂ ಬೆಳೆಯುವ ಹೆಮ್ಮರ . ನಮ್ಮದಲ್ಲದ ಈ ಮರ, ಮೂಲತಃ ಪೂರ್ವ ಏಶಿಯಾದ್ದು. ಚೀನಾ, ಜಪಾನ್‌, ತೈವಾನ್‌ಗಳಲ್ಲಿ ಇದರ ಬೆಳವಣಿಗೆ ಜನಪ್ರಿಯವಾದುದು. ಆದರೆ “ಕರ್ಪೂರ”ದ ಪರಿಮಳ ಮಾತ್ರ ಬಹು ಪಾಲು ಭಾರತೀಯರಿಗೆ ಅದರಲ್ಲೂ ತಿನಿಸುಗಳಲ್ಲಿಯೂ ಪರಿಚಿತ. (ತಿರುಪತಿ ತಿಮ್ಮಪ್ಪನ ಲಾಡುವಿನಲ್ಲಿ ಪಚ್ಚ ಕರ್ಪುರವನ್ನೇ ಬಳಸಿ ತಯಾರಿಸುತ್ತಾರೆ ) ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ವಾತಾವರಣದಲ್ಲಿ ಸಾಮಾನ್ಯವಾಗಿ *ಬೆಳೆವ “ಚಕ್ಕೆ”-ಸಿನ್ನಮೊಮಂ- (Cinnamomum ) ಕುಲಕ್ಕೆ ಸೇರಿದ ಕರ್ಪೂರದ ಮರ. ಹಲವಾರು ಪ್ರಭೇದಗಳುಳ್ಳ ಸಿನ್ನಮೊಮಂ, ಸಂಕುಲವು ಲರೇಸಿಯೆ (Lauraceae ) ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ.*

ನಿಜವಾದ ಕರ್ಪೂರವು ಜ್ವಾಲೆಗೆ ಕರಗಿ ನೀರಾಗದೆ ನೇರವಾಗಿ ಆವಿಯಾಗುತ್ತದೆ. ಇದು ಕರ್ಪೂರದ ವಿಶೇಷವೂ ಹೌದು! ಅದನ್ನು ರಸಾಯನ ವಿಜ್ಞಾನದ “ಉತ್ಪತನ-(Sublimation)”ಕ್ರಿಯೆ ಎಂದು ಕರೆಯುತ್ತಾರೆ . ಇದು ಕರ್ಪೂರದ ವೈಜ್ಞಾನಿಕ ಸತ್ಯ

ಈಗ ಕರ್ಪುರದ ಬಗ್ಗೆ ಇನ್ನೂ ವಿವರಗಳನ್ನು ತಿಳಿಯೋಣ.

ಕರ್ಪೂರ ಮರದ ಸಂಪೂರ್ಣ ಮಾಹಿತಿ


*ಕರ್ಪೂರದ ಮರದ ತೊಗಟೆಯೂ ನಮ್ಮ ಸಾಂಬಾರಿನ ಚಕ್ಕೆಯಂತೆಯೇ ಪರಿಮಳಯುತವಾಗಿದ್ದು, ಜೊತೆಗೆ ಎಲೆಗಳೂ ಕೂಡ ಪರಿಮಳವನ್ನು ಹೊಂದಿದೆ.* ಶತಮಾನಗಳಿಂದ ಕರ್ಪೂರವನ್ನು ಮಾನವ ಕುಲವು ಬಳಸುತ್ತಾ ಬಂದಿದೆ. ರಸಾಯನಿಕವಾಗಿ ಕರ್ಪೂರವು ಒಂದು ಇಂಗಾಲದ ವಸ್ತುವಾಗಿದ್ದು ಹತ್ತು ಇಂಗಾಲದ, ಹದಿನಾರು ಜಲಜನಕದ ಅಣುಗಳಿರುವ ಒಂದೇ ಆಮ್ಲಜಕವುಳ್ಳ (C10H16O) ರಸಾಯನಿಕ ಸೂತ್ರವನ್ನು ಹೊಂದಿದೆ. ಹಾಗಾಗಿ ಆಮ್ಲಜನಕವನ್ನು ಬೇಗ ಸೆಳೆದುಕೊಂಡು ಜ್ವಾಲೆಯಲ್ಲಿ ಕರಗಿ ಉತ್ಕರ್ಷಣವಾಗಿ ಹಾಗೇ ಆವಿಯೂ ಆಗುತ್ತದೆ. Camphor ಪದವು ಫ್ರೆಂಚ್‌ ಪದ ಕಾಫ್‌ಹ್ರ್ (Camphre) ದಿಂದ ವಿಕಾಸ ಹೊಂದಿದೆ. ಫ್ರೆಂಚ್‌ ಪದವು ಮಧ್ಯಕಾಲೀನ ಲ್ಯಾಟಿನ್‌ ನಿಂದಲೂ, ಲ್ಯಾಟಿನ್‌ ಪದವು ಅರಬಿಕ್‌ ನಿಂದಲೂ, *ಅರಾಬಿಕ್‌ನಿಂದ ತಮಿಳಿನ ʼಕರ್ಪೂರಂʼ ದು ಎಂದೂ ಅಂದಾಜಿಸಲಾಗಿದೆ*. ನಮ್ಮ ದೇಶದ ಮುಂಬೈ ನಗರ ಕರ್ಪೂರದ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದೆ.

       ಸುವಾಸನೆಯ ಭಾಗಗಳನ್ನು ಹೊಂದಿರುವ ಮರ! ಎಲೆಗಳನ್ನು ಕೈಯಲ್ಲಿ ಕಿತ್ತು ಉಜ್ಜಿದರೆ ಸಾಕು ಅಂಗೈಯೆಲ್ಲಾ ಕರ್ಪೂರದ ಪರಿಮಳ! ಎಲೆಗಳು ಮೇಲ್ಮೈಯು ಎಣ್ಣೆಯನ್ನು ಹಚ್ಚಿದಂತೆ ಹೊಳೆಯುತ್ತಿರುತ್ತವೆ. ತಳ ಭಾಗವು ತುಸು ಮಾಸಲು ಬಿಳಿಯದಾದ ಹಸಿರು ಬಣ್ಣವನ್ನು ಹೊಂದಿರುತ್ತವೆ. ಎಲೆಗಳಲ್ಲೂ ಕರ್ಪೂರದ ಎಣ್ಣೆಯು ಇದ್ದರೂ, ಅದರ ಒಳಗಿನ ಕಾಂಡ (Inner Wood) ಸಾಕಷ್ಟು ಕರ್ಪೂರದ ಇಳುವರಿಯನ್ನು ಕೊಡುತ್ತದೆ. ಮರವನ್ನು ಹೊರ ತೊಗಟೆಯನ್ನು ಚೆನ್ನಾಗಿ ತೊಳೆದು, ಇಲ್ಲವೇ ತೆಳುವಾಗಿ ಸುಲಿದು, ಒಳ-ಮರವನ್ನು ಸಣ್ಣ ಸಣ್ಣ ತುಂಡುಗಳಾಗಿಸಿ ಶುದ್ಧವಾದ ನೀರಿನಲ್ಲಿ ಭಟ್ಟಿ ಇಳಿಸಲಾಗುತ್ತದೆ. ಅದರಿಂದ ಪಡೆದ ಎಣ್ಣೆಯನ್ನು ನೀರಲ್ಲಿಯೇ ಘನೀಕರಿಸಿ ತೇಲಿಸಿದಾಗ ಶುದ್ಧ ಕರ್ಪೂರ ದೊರೆಯುತ್ತದೆ. ಬಹು ಪಾಲು ತಿನಿಸುಗಳಿಗೆ ಸುಗಂಧವಾಗಿ ಬಳಸುವ ಕರ್ಪೂರವನ್ನು “ಪಚ್ಚ ಕರ್ಪೂರ” ಎಂದು ಕರೆಯುತ್ತೇವೆ. ಅದನ್ನು ಸಾಮಾನ್ಯವಾಗಿ ಹೀಗೆ ಕರ್ಪೂರದ ಮರದಿಂದಲೇ ಪಡೆಯಲಾಗುತ್ತದೆ. ಆದರೆ ಪೂಜೆಯ ಆರತಿಯಲ್ಲಿ ಬಳಸುವ ಕರ್ಪೂರವನ್ನು ಕೃತಕವಾಗಿಯೂ ತಯಾರಿಸಲಾಗುತ್ತದೆ. ಅಲ್ಲದೆ ಇತರೇ ಕೆಲವು ಮರಗಳ ಒಳಗಿನ ಕಾಂಡದ ಮೂಲಕ ಪಡೆಯಲಾಗುತ್ತದೆ.    

       *ಕರ್ಪೂರವನ್ನು ಭಟ್ಟಿ ಇಳಿಸಿ ಪಡೆಯುವ ಬಿಳಿಯ ಘನೀಕೃತವಾದ ವಸ್ತು. ಕರ್ಪೂರದ ಮರವನ್ನು ಬೆಂಕಿಯಲ್ಲಿ ಹುರಿದು, ಅದರಿಂದ ಆವಿಯಾಗುವ ಎಣ್ಣೆಯನ್ನು (ಮೂಲತಃ ರಾಳ-ರೆಸಿನ್)‌, ಅದರ ಮೇಲೆಯೆ ಹಬೆಯನ್ನು ಹಾಯಿಸಿ ಘನೀಕರಿಸಿ, ನಂತರ ಪಡೆಯಲಾಗುತ್ತಿತ್ತು.* ಇದನ್ನು ಜಪಾನಿಯರು ಶತಮಾನಗಳ ಕಾಲ ಪ್ರಭುತ್ವ ಹೊಂದಿದ್ದರು. 20ನೆಯ ಶತಮಾನದ ಆದಿಯಲ್ಲಿ ಕೃತಕವಾಗಿ ಸಂಸ್ಕರಿಸುವ ವಿಧಾನವನ್ನು ಕಂಡುಹಿಡಿದ ಮೇಲೆ ಬಗೆ ಬಗೆಯ ಕಾರ್ಖಾನೆಗಳು ತಲೆಯೆತ್ತಿವೆ. ಆದರೂ ನೈಸರ್ಗಿಕವಾದ ಪಚ್ಚ ಕರ್ಪೂರ ಎಂದೂ ಈಗಲೂ ಮಾರುಕಟ್ಟೆಯಲ್ಲಿ ಸಿಗುತ್ತದೆ. ಕರ್ಪೂರವನ್ನು ತಿನ್ನಲು ಬಳಸುವಲ್ಲಿ ಇಂಡಿಯಾ ಮೇಲುಗೈ. ಅನೇಕ ಸಿಹಿಗಳಲ್ಲಿ, ಕುಡಿಯುವ ನೀರಿನಲ್ಲೂ ಪರಿಮಳಕ್ಕೆ ಬಳಸುತ್ತಾರೆ. ಅಲ್ಲದೆ ಔಷಧಗಳಲ್ಲಿ ಮುಖ್ಯವಾಗಿ “ಉರಿ” ತರಿಸುವಂತಹಾ ವಿಕ್ಸ್‌ ವೆಪೊರಬ್‌ ಮುಂತಾದ ಔಷಧಗಳಲ್ಲಿ ಬಳಸುತ್ತಾರೆ. ಗಂಟಲಿನ ಶುದ್ಧೀಕರಣಕ್ಕೆ ಕರ್ಪೂರದ ಹಬೆಯನ್ನು ಉಸಿರಾಡುವುದೂ ಕೂಡ ಬಳಕೆಯಲ್ಲಿದೆ.   

ಕರ್ಪೂರವು ಒಂದು ಬಗೆಯ ಮೇಣದಂತಹಾ ವಸ್ತು. ಅದರ ಗಾಢವಾದ ವಾಸನೆಯು ಟರ್ಪಿನಾಯ್ಡ್‌ ಗಳೆಂಬ ಇಂಗಾಲಯುತ ರಾಸಾಯನಿಕ. ಶೀತ, ನೆಗಡಿ, ಕೆಮ್ಮು ನಿವಾರಕವಾಗಿ ನೂರಾರು ವರ್ಷಗಳಿಂದ ಬಳಕೆಯಲ್ಲಿದೆ. *ಪಾರಂಪರಿಕವಾಗಿ ಕರ್ಪೂರವನ್ನು ಹಾಲುಣಿಸುವ ಹೆಣ್ಣು ಮಕ್ಕಳ ಎದೆಯ ಹಾಲಿನ ಉತ್ಪಾದನೆಯನ್ನು ಕಡಿಮೆ ಮಾಡಲೂ ಕೂಡ ಬಳಸುತ್ತಾರೆ. ಕರ್ಪೂರವು ಕೃತಕ ಅಬಾರ್ಶನ್‌ ಅನ್ನು‌ ಉಂಟು ಮಾಡಲೂ ಸಹಾ ಪಾರಂಪರಿಕ ಪದ್ಧತಿಗಳಲ್ಲಿ ಬಳಸುವ ರೂಢಿ ಇದೆ*. ಇತ್ತೀಚೆಗೆ ಕರ್ಪೂರದ ಅನೇಕ ಔಷಧೀಯ ಗುಣಗಳ ವೈದ್ಯಕೀಯ ಅಧ್ಯಯನಗಳೂ ನಡೆದಿವೆ. ಚರ್ಮ ಹಾಗೂ ಗಂಟಲಿನ ಕಾಯಿಲೆಗಳ ಸಂಬಂಧದವು ಅಲ್ಲದೆ ಇತರೇ ಜೀವಿವೈಜ್ಞಾನಿಕ ಅಧ್ಯಯನಗಳೂ ಪ್ರಮುಖವಾಗಿವೆ. ಹೆಚ್ಚು ಪ್ರಮಾಣದ ಕರ್ಪೂರವನ್ನು ನೇರವಾಗಿ ನುಂಗುವುದು ಅಪಾಯಕಾರಿ ! *ಕರ್ಪೂರವು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅದು ನರಮಂಡಲಕ್ಕೆ ವಿಷಕಾರಿ. ವಿಕ್ಸ್, ಝoಡುಬಾಮ್, ಅಮೃತಾಂಜನ್ ಹಾಗೂ ಇತರೆ ನೋವು ನಿವಾರಕ ಔಷಧಿಗಳನ್ನು ತಯಾರು ಮಾಡುವ ಕಂಪನಿಗಳು, ಒಂದು ವರ್ಷಕ್ಕೆ ಒಂದು ಮರದಿಂದ ನೂರಾರು ಕೋಟಿ ಹಣ ಸಂಪಾದಿಸುತ್ತವೆ...

ಹೆಚ್ಚಿನ ಲೇಖನಗಳನ್ನು ಓದಿ


ಸುಗಂಧರಾಜ ಹೂವಿನ ಲಾಭದಾಯಕ ಕೃಷಿ ಬೆಳೆಯುವುದು ಹೇಗೆ ?

ಚಳಿಗಾಲದಲ್ಲಿ ಬೆಳೆಯುವ ತರಕಾರಿಗಳ ಸಂಪೂರ್ಣ ಮಾರ್ಗದರ್ಶಿ 

ಸೇವಂತಿಗೆ ಹೂವಿನ ಕೃಷಿ ಮಾಡುವ ಮೊದಲು ಈ ಲೇಖನವನ್ನುತಪ್ಪದೆ ಓದಿ. 

ಸಾವಯವ ಕಲ್ಲಂಗಡಿ ಕೃಷಿ, ಬೆಳೆಯುವ ಮತ್ತು ಅನುಸರಿಸಬೇಕಾದ ಕ್ರಮಗಳು




FOLLOW ON:-


http://bit.ly/kannadigakrushih

https//bit.ly/onlinetechreviewsfb

 https://bit.ly/kannadigakrushidotin





Comments

Popular posts from this blog

ಡ್ರ್ಯಾಗನ್ ಹಣ್ಣು ಕೃಷಿಯ ಸಂಪೂರ್ಣ ಮಾರ್ಗದರ್ಶಿ

 ಡ್ರ್ಯಾಗನ್ ಹಣ್ಣುಯ  ಕೃಷಿ ಸಂಪೂರ್ಣ ಮಾರ್ಗದರ್ಶಿ ಡ್ರ್ಯಾಗನ್  ಹಣ್ಣಿನ ಪರಿಚಯ  ಇತ್ತೀಚಿನ ವರ್ಷಗಳಲ್ಲಿ, ಡ್ರ್ಯಾಗನ್ ಹಣ್ಣು ಭಾರತದಲ್ಲಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದ್ದು, ಈಗ ಅನೇಕ ರೈತರು ಈ ಹೊಸ ಬೆಳೆಗೆ ಕೈ ಹಾಕುತ್ತಿದ್ದಾರೆ. ಈ ಹಣ್ಣನ್ನು ಸಾಮಾನ್ಯವಾಗಿ ಥೈಲ್ಯಾಂಡ್, ಶ್ರೀಲಂಕಾ, ಇಸ್ರೇಲ್ ಮತ್ತು ವಿಯೆಟ್ನಾಂನಲ್ಲಿ ಬೆಳೆಯಲಾಗುತ್ತದೆ ಆದರೆ ಈಗ ಭಾರತದಲ್ಲೂ ಕೂಡ ಬೆಳೆಯಲು ಪ್ರಾರಂಭಿಸಿದ್ದಾರೆ. ಡ್ರ್ಯಾಗನ್ ಹಣ್ಣು ಬೆಳೆಯಲು ಹವಾಮಾನ ಈ ಬೆಳೆಗಳ ಒಂದು ಪ್ರಮುಖ ಅರ್ಹತೆಯೆಂದರೆ, ಇದು ತಾಪಮಾನದ ವಿಪರೀತ ಮತ್ತು ಅತ್ಯಂತ ಬಡ ಮಣ್ಣಿನಲ್ಲಿ ಬೆಳೆಯಬಲ್ಲದು ಆದರೆ ಉಷ್ಣವಲಯದ ಹವಾಮಾನಕ್ಕೆ ಸೂಕ್ತವಾಗಿರುತ್ತದೆ, ಇದು ವಾರ್ಷಿಕ 40-60 ಸೆಂ.ಮೀ ಮಳೆಯೊಂದಿಗೆ ಬೆಳವಣಿಗೆಗೆ ಸೂಕ್ತವಾಗಿರುತ್ತದೆ. 20 ° C- 30 ° C ವರೆಗಿನ ತಾಪಮಾನವು ಬೆಳೆ ಬೆಳೆಯಲು ಉತ್ತಮವೆಂದು ಪರಿಗಣಿಸಲಾಗುತ್ತದೆ. ಡ್ರ್ಯಾಗನ್ ಹಣ್ಣಿಗೆ ಮಣ್ಣಿನ ಅವಶ್ಯಕತೆ ಹೆಚ್ಚಿನ ಸಾವಯವ  ಮರಳು ಮಿಶ್ರಿತ ಮಣ್ಣಿನ ಆದ್ಯತೆ ನೀಡುತ್ತದೆ ಮತ್ತು ಉತ್ತಮ  ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.ಸಾವಯವ ಪದಾರ್ಥಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಹೆಚ್ಚಿನ ಸಾವಯವ ಅಂಶದೊಂದಿಗೆ ಮರಳು ಮಿಶ್ರಿತ ಮಣ್ಣಿನಿಂದ ಡ್ರ್ಯಾಗನ್ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.ಉತ್ತಮ ಬೆಳವಣಿಗೆ ಮತ್ತು ಹಣ್ಣಿನ ಉತ್ಪಾದನೆಗಾಗಿ ತೆರೆದ ಬಿಸಿಲು ಪ...

ಚಳಿಗಾಲದಲ್ಲಿ ಬೆಳೆಯುವ ತರಕಾರಿಗಳ ಸಂಪೂರ್ಣ ಮಾರ್ಗದರ್ಶಿ

ಚಳಿಗಾಲದಲ್ಲಿ ಬೆಳೆಯುವ ತರಕಾರಿಗಳು  ಸಂಪೂರ್ಣ ಮಾರ್ಗದರ್ಶಿ ಪರಿಚಯ: ಹಲೋ ರೈತರೆ ಮತ್ತು ತೋಟಗಾರೆ, ಇಂದು ನಾವು ಚಳಿಗಾಲದಲ್ಲಿ ತರಕಾರಿಗಳನ್ನು ಬೆಳೆಯುವ ಉತ್ತಮ ಮಾಹಿತಿಯೊಂದಿಗೆ ಮರಳಿದ್ದೇವೆ. ಚಳಿಗಾಲದ ತರಕಾರಿ ಬೆಳೆಯುವಿಕೆಯು ಕಾಲವನ್ನು ವಿಸ್ತರಿಸಲು ನಿಮಗೆ ಅನುವು ಮಾಡಿಕೊಡುತ್ತದೆ ಮತ್ತು ಚಳಿಗಾಲದಲ್ಲಿ ಬೆಳೆಯಬಹುದಾದ ಹಲವಾರು ತರಕಾರಿಗಳು ವಸಂತ ನೆಡುವಿಕೆಗಿಂತ ಹಿಂದಿನ ಬೆಳೆಗಳನ್ನು ಉತ್ಪಾದಿಸುತ್ತವೆ. ಚಳಿಗಾಲದಲ್ಲಿ ತರಕಾರಿಗಳನ್ನು ಬೆಳೆಯಲು ಹಂತ ಹಂತದ ಮಾರ್ಗದರ್ಶಿ ಚಳಿಗಾಲದ ತರಕಾರಿ ತೋಟಗಾರಿಕೆಗೆ ಯಶಸ್ವಿ ಶೀತವನ್ನು ಸಹಿಸಿಕೊಳ್ಳುವ ಗಟ್ಟಿಯಾದ ತರಕಾರಿಗಳನ್ನು ನೆಡುವುದು. ತೋಟದಲ್ಲಿ ವೈವಿಧ್ಯಮಯ ತರಕಾರಿಗಳನ್ನು ಬೆಳೆಯಲು ಭಾರತೀಯ ಚಳಿಗಾಲವು ಅತ್ಯುತ್ತಮ ಋತುವಾಗಿದೆ. ಈ ಬೆಳವಣಿಗೆಯ ಋತುವನ್ನು ರಬಿ ಸೀಸನ್ ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಕೆಲವು ರೀತಿಯ ತರಕಾರಿಗಳನ್ನು ರಬಿ ಬೆಳೆಗಳಾಗಿ ಮಾತ್ರ ಬೆಳೆಯಲಾಗುತ್ತದೆ. ಚಳಿಗಾಲದಲ್ಲಿ ತರಕಾರಿಗಳನ್ನು ಬೆಳೆಯಲು ಮಾರ್ಗದರ್ಶಿ. ಚಳಿಗಾಲದ ತರಕಾರಿಗಳ ಮೇಲೆ ಮಣ್ಣು ಮತ್ತು ಪರಿಸರದ ಪರಿಣಾಮ ಬೆಳೆ ಉತ್ಪಾದನೆಯಲ್ಲಿ ಮಣ್ಣು ಮತ್ತು ಪರಿಸರ ಮುಖ್ಯ ಭಾಗವಾಗಿದೆ. ತರಕಾರಿಗಳಿಗೆ ಉತ್ತಮ ಉತ್ಪಾದನೆಗಾಗಿ ಉತ್ತಮ ಮಣ್ಣು ಮತ್ತು ಪರಿಸರದ ಅಗತ್ಯವಿರುತ್ತದೆ. ಚಳಿಗಾಲದಲ್ಲಿ ಮುಖ್ಯವಾಗಿ ತರಕಾರಿ ಉತ್ಪನ್ನಗಳು. ಆದರೆ ಋತುವಿನ ಉದ್ದಕ್ಕೂ ತರಕಾರಿ ಸಸ್ಯಗಳು ಬೆಳೆಯಬಹುದು. ತರಕಾರಿಗಳಲ್ಲಿ, ಉತ್...