ಭಾರತೀಯರಿಗೆ ಕರ್ಪೂರವನ್ನೇನೂ ಪರಿಚಯಿಸಬೇಕಿಲ್ಲ. ಕರ್ಪೂರದ ಮರವನ್ನು ಖಂಡಿತಾ ಪರಿಚಯಿಸಬೇಕಿದೆ.ಏಕೆಂದರೆ *ಕರ್ಪುರ ಸಿಗುವುದು ಮರದಿಂದ, ಕೆಲವರಿಗೆ ಅಚ್ಚರಿ ಅನ್ನಿಸಬಹುದು, ಕರ್ಪುರ ಸಿಗುವುದು ಮರದಿಂದನಾ?* ನಿಜ- ಇದೊಂದು 50-60 ಅಡಿಗಳಿಂದ ನೂರಾರು ಅಡಿಗಳವರೆಗೂ ಬೆಳೆಯುವ ಹೆಮ್ಮರ . ನಮ್ಮದಲ್ಲದ ಈ ಮರ, ಮೂಲತಃ ಪೂರ್ವ ಏಶಿಯಾದ್ದು. ಚೀನಾ, ಜಪಾನ್, ತೈವಾನ್‌ಗಳಲ್ಲಿ ಇದರ ಬೆಳವಣಿಗೆ ಜನಪ್ರಿಯವಾದುದು. ಆದರೆ “ಕರ್ಪೂರ”ದ ಪರಿಮಳ ಮಾತ್ರ ಬಹು ಪಾಲು ಭಾರತೀಯರಿಗೆ ಅದರಲ್ಲೂ ತಿನಿಸುಗಳಲ್ಲಿಯೂ ಪರಿಚಿತ. (ತಿರುಪತಿ ತಿಮ್ಮಪ್ಪನ ಲಾಡುವಿನಲ್ಲಿ ಪಚ್ಚ ಕರ್ಪುರವನ್ನೇ ಬಳಸಿ ತಯಾರಿಸುತ್ತಾರೆ ) ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ವಾತಾವರಣದಲ್ಲಿ ಸಾಮಾನ್ಯವಾಗಿ *ಬೆಳೆವ “ಚಕ್ಕೆ”-ಸಿನ್ನಮೊಮಂ- (Cinnamomum ) ಕುಲಕ್ಕೆ ಸೇರಿದ ಕರ್ಪೂರದ ಮರ. ಹಲವಾರು ಪ್ರಭೇದಗಳುಳ್ಳ ಸಿನ್ನಮೊಮಂ, ಸಂಕುಲವು ಲರೇಸಿಯೆ (Lauraceae ) ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ.* ನಿಜವಾದ ಕರ್ಪೂರವು ಜ್ವಾಲೆಗೆ ಕರಗಿ ನೀರಾಗದೆ ನೇರವಾಗಿ ಆವಿಯಾಗುತ್ತದೆ. ಇದು ಕರ್ಪೂರದ ವಿಶೇಷವೂ ಹೌದು! ಅದನ್ನು ರಸಾಯನ ವಿಜ್ಞಾನದ “ಉತ್ಪತನ-(Sublimation)”ಕ್ರಿಯೆ ಎಂದು ಕರೆಯುತ್ತಾರೆ . ಇದು ಕರ್ಪೂರದ ವೈಜ್ಞಾನಿಕ ಸತ್ಯ ಈಗ ಕರ್ಪುರದ ಬಗ್ಗೆ ಇನ್ನೂ ವಿವರಗಳನ್ನು ತಿಳಿಯೋಣ. *ಕರ್ಪೂರದ ಮರದ ತೊಗಟೆಯೂ ನಮ್ಮ ಸಾಂಬಾರಿನ ಚಕ್ಕೆಯಂತೆಯೇ ಪರಿಮಳಯುತವಾಗಿದ್ದು, ಜೊತೆಗೆ ಎಲೆಗಳೂ ಕೂಡ ಪರಿಮಳವನ...
ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುವುದು ಹೇಗೆ? ಭಾಗ -1 ಉದಾಹರೆಗಾಗಿ:- 1.ಟಮೋಟೋವನ್ನೂ🍅 ವರ್ಷದಲ್ಲಿ ನಾಲ್ಕರಿಂದ ಐದು ಬಾರಿ ಬೆಳೆಯಬಹುದು. ಹೆಚ್ಚು ಅಂದರೆ ಎರಡು ಸಲ ಒಳ್ಳೆ ರೇಟ್ ಆದಾಯ ಸಿಗಬಹುದು. ಅದ್ದರೆ ಅದೇ ಟೊಮೇಟೊವನ್ನೂ ಕಡಿಮೆ ಬೆಲೆ ಇದ್ದಾಗ ರೋಡಲ್ಲಿ ಚಲ್ಲಿ ಬೆಂಬಲ ಬೆಲೆ ಬೇಕು ಅಂತ ಕುರೋ ಬದಲು ಅದೇ ಟೊಮೆಟೊವನ್ನ 🍅 ಸಾಸ್/ಕೇಚಪ್,ಮಾಡಿ ಮಾರಾಟ ಮಾಡಿದರೆ ಲಾಭ 5 ಪಟ್ಟು ಹೆಚ್ಚು ಸಿಗಬಹುದು. ರೈತರು ಸಹಾ ಹತ್ತಾರು ಜನಗಳಿಗೆ ಕೆಲಸ ಕೋಟಂತಗುತದೆ. 2. ಆಲೂಗಡಡೆಯನ್ನು ಬೆಳೆ ಬೆಳೆದ ರೈತರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಇದ್ದಾಗ ಪೊಟಾಟೋ 🥔 ಚಿಪ್ಸ್ ಮಾಡಿ ಪ್ಯಾಕ್ನಲ್ಲಿ ಮಾರಾಟ ಮಾಡಿದರೆ ಅತೀ ಹೆಚ್ಚು ಲಾಭ. 3. ಮೆಣಸಿನಕಾಯಿ 🌶️ ಬೆಳೆ ಬೆಳೆದ ರೈತರು ಚಿಲ್ಲಿ ಸಾಸ್ ಮಾಡಿ ಮಾರಾಟ ಮಾಡಬಹದಾಗಿದೆ. 4. ಮಾವಿನಕಾಯಿ 🥭 ಬೆಳೆ ಬೆಳೆದ ರೈತರು ಉಪ್ಪಿನಕಾಯಿ ಪಾಕ್ ಮಾಡಿ ಮಾರಾಟ ಮಾಡಬಹುದು. ಅಥವಾ ಮಂಗೊ 🥤 🧃 ಜ್ಯೂಸ್ ಮಾಡಿ ಮಾರಾಟ ಮಾಡಬಹುದು. 5. ತೆಂಗು ಬೆಳೆ 🥥 ಬೆಳೆದ ರೈತರು ಕೊಬ್ಬರಿ ಮಾಡಿ ಕೊಬ್ಬರಿ ಎಣ್ಣೆ ತಯಾರು ಮಾಡಿ ಮಾರಾಟ ಮಾಡಬಹುದು. 6. ಕಡಲೆಕಾಯಿ ಬೆಳೆ ಬೆಳೆದ ರೈತರು ಕಡಲೆ ಎಣ್ಣೆ ತಯಾರು ಮಾಡಿ ಮಾರಾಟ ಮಾಡಬಹುದು. 7. ಭತ್ತ 🌾 ಬೆಳೆದ ರೈತರು ಅಕ್ಕಿ ಪ್ಯಾಕೆಟ್ ಮಾಡಿ ಮಾರಾಟ ಮಾಡಬಹುದು ಅಥವಾ ಅಕ್ಕಿ ಹಿಟ್ಟು ಮಾಡಿ ಮಾರಾಟ ಮಾಡಬಹುದು. 8. ಕಬ್ಬು ಬೆಳೆದ ರೈತರು ಬೆಲ್ಲ ...